ಕನ್ನಡ ನಾಡು | Kannada Naadu

ಬಿಸಿಲ ಧಗೆಗೆ ಕೊತ..ಕೊತ ಕುದಿಯುತ್ತಿರುವ ಸಿಂಟ್ಯಾಕ್ಸ್‌ನಲ್ಲಿಯ ನೀರು ..!!  ಅಸಲಿಯೋ..! ನಕಲಿಯೋ.. ?  

05 Jun, 2024

ನವದೆಹಲಿ : ದೇಶದ ಎಲ್ಲೆಡೆ ರಾಜಕೀಯದ ತಾಪ ಹೆಚ್ಚಾಗುತ್ತಿರೂ, ದೇಹಲಿಯ ತಾಪಮಾನ ಮೀರಿಸುವುದಕ್ಕೆ ಸಾಧ್ಯವೇ ಇಲ್ಲ ಎನ್ನುವ ಮಾತು ಈಗ ಮತ್ತೊಮ್ಮೆ ಸಾಬಿತಾಗುತ್ತಿದೆ. ರಾಜಧಾನಿ ನವದೆಹಲಿಯಲ್ಲಿ ಬಿಸಿ ಗಾಳಿಯ ಆರ್ಭಟ ನಿರಂತರ ಮುಂದುವರಿದಿದೆ. ಪರಿಣಾಮ ಇಲ್ಲಿಯ ಜನ ಶಾಖದ ಅಲೆಗೆ ತತ್ತರಿಸಿಬಿಟ್ಟಿದ್ದಾರೆ. ಅಲ್ಲಿನ ಬಿಸಿಲಿನ ಕಾವಿಗೆ ಮನೆಗಳ ಮೇಲೆ ಇರುವ ನೀರು ಸಂಗ್ರಹಿಸುವ ಸಿಂಟ್ಯಾಕ್ಸ್ ನಲ್ಲಿ ತುಂಬಿರುವ ನೀರು ಕೊತ ಕೊತ ಕುದಿಯಲು ಆರಂಭಿಸಿದೆಯಂತೆ. ಸುದ್ದಿ ಈಗ ಭಾರಿ ಚರ್ಚೆಯಲ್ಲಿ ಇದ್ದು ಸಾಮಾಜಿಕ ಜಾಲ ತಾಣದಲ್ಲಿ ಟ್ರೆಂಡ್‌ ಸೃಷ್ಟಿ ಮಾಡಿಬಿಟ್ಟಿದೆ.

     ಹೌದು ಇಂಥಹ ಪರಸ್ಥಿತಿ ಯಾವತ್ತು ಆಗಿರಲಿಲ್ಲ ಎನ್ನುವ ಮಾತು ಸ್ಥಳೀಯರು ಹೇಳುವ ಪರಸ್ಥಿತಿ ಬಂದು ಬಿಟ್ಟಿದೆ. ತಮ್ಮ ಮನೆಗಳ ಮೇಲಿನ  ಸಿಂಟ್ಯಾಕ್ಸ್ ನಲ್ಲಿ ತುಂಬಿರುವ ನೀರು ಕೊತ ಕೊತ ಕುದಿಯುತ್ತಿರವ ವಿಡೀಯೊ ಚಿತ್ರಿಕರಿಸಿ ಜನರು ತಮ್ಮ ಸ್ಥಿತಿಯನ್ನು ಹೇಳಿಕೊಳ್ಳುತ್ತಿದ್ದಾರೆ.   ಹಲವು ದಿನಗಳಿಂದ ದೆಹಲಿಯು ತೀವ್ರ ಬಿಸಿಗಾಳಿಯಿಂದ ತತ್ತರಿಸಿದೆ. 
      ರಾಷ್ಟ್ರ ರಾಜಧಾನಿಯಲ್ಲಿ ಗರಿಷ್ಠ ತಾಪಮಾನವು 44 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆ ಇದೆ. ಮುಂದಿನ 24 ಗಂಟೆಯಲ್ಲಿ ತಾಪಮಾನ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆಯಂತೆ. ಹೀಗಾಗಿ ಸದ್ಯ ಭಾರತೀಯ ಹವಾಮಾನ ಇಲಾಖೆ (IMD) ದೆಹಲಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ನವದೆಹಲಿಯಲ್ಲಿ ಈ ಹಿಂದೆ ಉರಿ ಬೆಸಿಗೆಯ ವಿಚಾರವಾಗಿ ರೆಡ್ ಅಲರ್ಟ್ ಪಡೆದಿತ್ತು. ದೆಹಲಿಯ ಕೆಲವಡೆ ಗರಿಷ್ಠ ತಾಪಮಾನ 52 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಇಂತಹ ಶಾಖದ ಅಲೆಗೆ 'ದೆಹಲಿಯಲ್ಲಿನ ಶಾಖವು ನೀರನ್ನು ಕುದಿಸುತ್ತಿದೆ' ಎಂಬ ಶೀರ್ಷಿಕೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ನೆಟ್ಟಿಗರ ಜೊತೆ ಸಾರ್ವಜನಿಕ ವಲಯದಲ್ಲಿ ಚಿಂತೆಗೆ ಕಾರಣವಾಗಿ ಬಿಟಿದೆ.
     ಈಗಾಲೆ ವೈರಲ್‌ ಆಗಿರುವ ವಿಡಿಯೋ ಅನ್ನು ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಸಿಂಟ್ಯಾಕ್ಸ್‌ನಲ್ಲಿ ತುಂಬಿರುವ ನೀರು ಬಿಸಿಲಿನ ಶಾಖಕ್ಕೆ ಕೊತ ಕೊತ ಕುದಿಯುತ್ತಿರುವ, ನೀರಿನ ಮೇಲೆ ಕುದಿಯುವ ನೀರಿನ ಗುಳ್ಳೆಗಳು ಹೊರಬರುತ್ತಿರುವುದು ಜನರ ನಿದ್ದೆ ಗೆಡಿಸಿದೆ. 
      ಈ ವಿಡೀಯೊ ವೈರಲ್‌ ಆಗುತ್ತಿದ್ದಂಯೆ ವಾದ ವಿವಾದಗಳು ಕೇಳಿಬರುತ್ತಿದೆ. ಆದರೆ ವಾಸ್ತವದಲ್ಲಿ ಈ ನೀರಿನ ಟ್ಯಾಂಕರ್ ನಲ್ಲಿ ನೀರು ಪೂರೈಕೆಯ ಒತ್ತಡದಿಂದ ಗುಳ್ಳೆಗಳು ಬಿದ್ದಿರಬಹುದು. ಬಿಸಿಲಿಗೆ ನೀರು ಕಾಯುತ್ತಿಲ್ಲ ಅಂತ ಒಂದು ವರ್ಗದ ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ವಾಸ್ತವದಲ್ಲಿಈ ಪ್ರಕರಣವನ್ನು ವಿಜ್ಞಾನಗಳು ಸವಾಲಾಗಿ ಸ್ವಿಕರಿಸಿದ್ದು,  ಇದೊಂದು ವಿಲಕ್ಷಣ ವೀಡಿಯೊ ಆಗಿದೆ. ಈ ಬಗ್ಗೆ ಸೂಕ್ಮವಾಗಿ ಪರಿಶೀಲನೆಯ ಅವಶ್ಯಕತೆ ಇದೆ ಎನ್ನುವ ಮಾತನ್ನು ವ್ಯಕ್ತ ಪಡಿಸುತ್ತಿದ್ದಾರೆ. ಸದ್ಯ ಸಿಂಟ್ಯಾಕ್ಸ್‌ ಟ್ಯಾಂಕ್‌ನಲ್ಲಿ ನೀರು ಕುದಿಯುತ್ತಿರುವ ಈ ವಿಡೀಯೊವನ್ನು ಈವರೆಗೆ ಲಕ್ಷಾಂತರ ಜನರು ವೀಕ್ಷಣೆ ಮಾಡಿದ್ದು, ಬರೋಬ್ಬರಿ 99,000 ಲೈಕ್ಸ್‌ಗಳನ್ನು ಗಳಿಸಿದೆ ಬಂದಿವೆ.
https://x.com/ssaratht/status/1796798928303645054?
     ಇನ್ನೂ ಜಾಲತಾಣದಲ್ಲಿ ವಿಡಿಯೋ ಬಗ್ಗೆ ವೈಜ್ಞಾನಿಕ ಚರ್ಚೆ  ಆರಂಭವಾಗಿದ್ದು  ವಿವಿಧ ತರಹಗಳಲ್ಲಿ ಅಭಿಪ್ರಾಯಗಳನ್ನು  ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ. ಕೆಲವರಂತು ಇದು ಬಿಸಿಲಿನಿಂದ ಸುಡುತ್ತಿರುವ ನೀರಲ್ಲ ಎನ್ನುವ ವಾದವನ್ನು ಎತ್ತಿಹಿಡಿದಿದ್ದಾರೆ. ಟ್ಯಾಂಕ್ ಒಳಗೆ ಸಂಪರ್ಕಗೊಂಡಿರುವ ಟ್ಯಾಪ್‌ನಿಂದ ನೀರು ಉಕ್ಕಿ ಹರಿಯುತ್ತಿದೆ. ಹೊರಗಿನಿಂದ ನೋಡುವಾಗ ಈ ಬಿಳಿ ಸಿಂಟ್ಯಾಕ್ಸ್ ನಲ್ಲಿ ನೀರು ಬಿಸಿಲಿಗೆ ಕುದಿಯುವಂತೆ ಕಾಣುತ್ತಿದೆ. ವಾಸ್ತವಿಕವಾಗಿ ತಣ್ಣಿರು ಕುದಿಯ ಸ್ಥಿತಿಗೆ ಬರುವುದಕ್ಕೆ  ನೀರಿನ ಶಾಖವು ಸುಮಾರು 100 ಡಿಗ್ರಿ ಸೆಲ್ಸಿಯಸ್ ಆಗಲೇ ಬೇಕು. ಅಷ್ಟೊಂದು ಪ್ರಮಾಣದ ಉಷ್ಣಾಂಶ ಪ್ರಕೃತಿಯಲ್ಲಿ ಇದ್ದರೆ ಏನಾಗಿ ಬಿಡಬೇಡ ಎಂದು ಪ್ರಶ್ನೆ ಮಾಡಿದ್ದಾರೆ. ಹಾಗೇಯೆ ಮತ್ತೊಬ್ಬ ನೆಟ್ಟಟಿಗ ಈ ಕುರಿತು 'ಅಬ್ಕಿ ಬಾರ್ 50 ಪಾರ್' ಎಂದು ರಾಜಕೀಯದ ಬಣ್ಣ ಬಳಿದರೆ.  ಕೆಲವರಂತು ಇಷ್ಟು ಬಿಸಲಿಗೆ ನೀರು ಈ ಮಟ್ಟಕ್ಕೆ ಕುದಿಯುವುದಿಲ್ಲ. ಇದನ್ನು ನಂಬಬೇಡಿ. ನೀರು ಕುದಿಯಲು ಗರಿಷ್ಠ 100 ° C ಬೇಕಾಗುತ್ತದೆ  ತಾಪಮಾನ ಕುರಿತು  ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. 
        ಸದ್ಯ ದೆಹಲಿಯಲ್ಲಿನ ತಾಪಮಾನ ಹೆಚ್ಚಾಗಿರುವ ಕಾರಣ ಬಿಸಿ ಶಾಖದ ಅಲೆ ಬಗ್ಗೆ ಏನೇ ಹೇಳಿದರೂ ನಂಬುವ ವಾತಾವರಣ ಬಂದು ಬಿಟ್ಟಿದೆ. ಇದೇ ಕಾರಣಕ್ಕೆ ವೈರಲ್ ಆದ ವಿಡಿಯೋ ಹೆಚ್ಚು ಸದ್ದು ಮಾಡುತ್ತಿದೆ. ಜನರು ಕಾಲ ಕಾಲಕ್ಕೆ ಪ್ರಕೃತಿಯ ಬದಲಾವಣೆಯನ್ನು ಸಹ ಯಾವೆಲ್ಲಾ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳುವುದೇ  ಕಷ್ಟವಾಗಿದೆ.

https://x.com/ssaratht/status/1796798928303645054?

Publisher: ಕನ್ನಡ ನಾಡು | Kannada Naadu

Login to Give your comment
Powered by